ಪೇದ್ರೂ - ಪೋರ್ಚುಗಲ್ಲಿನ ಐವರು ದೊರೆಗಳ ಮತ್ತು ಬ್ರಜಿóಲ್ಲಿನ ಇಬ್ಬರು ಚಕ್ರವರ್ತಿಗಳ ಹೆಸರು.
ಪೋರ್ಚುಗಲ್ಲಿನ ದೊರೆಗಳು: ಪೇದ್ರೂ I: 1320-1367. ಬರ್ಗಂಡಿ ಮನೆತನದವ. 1357-1367ರಲ್ಲಿ ದೊರೆಯಾಗಿದ್ದ. 4ನೆಯ ಆಲ್ಫಾನ್ಸೋನ ಮಗ. ಕುಯಿಂಬ್ರದಲ್ಲಿ ಹುಟ್ಟಿದ. 1336ರಲ್ಲಿ ಕಾನ್ಸ್‍ಟನ್ಸ್ ಮಾನ್ಯುಯಲ್ ಎಂಬವಳನ್ನು ಮದುವೆಯಾದ. ಆಕೆ 1345ರಲ್ಲಿ ತೀರಿಕೊಂಡಳು. 1354ರಲ್ಲಿ ಈತ ಈನೇಸ್ ಡೆ ಕಾಸ್ಟೋ ಎಂಬುವಳನ್ನುರಹಸ್ಯವಾಗಿ ಮದುವೆಯಾದ. ಆದರೆ, ಇದು ಅಸಮ ವಿವಾಹವೆಂದೂ ಇದರಿಂದ ರಾಜಕೀಯ ಪರಿಣಾಮಗಳಾಗುವುವೆಂದೂ ಬಗೆದು ಇವಳನ್ನು ಪೇದ್ರೂನ ತಂದೆ ಆಲ್ಫಾನ್ಸೋ ಕೊಲೆ ಮಾಡಿಸಿದ. ಈ ದುರಂತ ಪ್ರಣಯವನ್ನು ಆಧರಿಸಿ ಅನೇಕ ಕವಿಗಳೂ ಕಾದಂಬರಿಕಾರರೂ ಕೃತಿರಚನೆ ಮಾಡಿದ್ದಾರೆ. ಪೇದ್ರೂ ದೊರೆಯಾದಾಗ ನ್ಯಾಯ ವಿಚಾರಗಳಲ್ಲಿ ವಿಶೇಷವಾದ ಆಸಕ್ತಿ ತಳೆದಿದ್ದ. ಅವನೇ ನೇರವಾಗಿ ನ್ಯಾಯಪಾಲನೆಯ ಕೆಲಸ ಮಾಡುತ್ತಿದ್ದ. ಇತರ ರಾಜ್ಯಗಳೊಡನೆ ಇವನು ರಾಜಕೀಯ ಸಂಬಂಧ ಇಟ್ಟುಕೊಂಡಿರಲಿಲ್ಲ. 
ಪೇದ್ರೂ II : 1648-1706. ಬ್ರಗಾಂನ್ಜಾ ಮನೆತನದ 4ನೆಯ ಜಾನನ ಮಗ. ಲಿಸ್ಟನ್ನಿನಲ್ಲಿ ಹುಟ್ಟಿದ. 6ನೆಯ ಆಲ್ಫಾನ್ಸೋನನ್ನು 1667ರಲ್ಲಿ ಸಿಂಹಾಸನದಿಂದ ಇಳಿಸಿ ದೊರೆಯಾದ. ಆಲ್ಫಾನ್ಸೋ ಪಾಶ್ರ್ವವಾಯುವಿಗೆ ಒಳಗಾಗಿ ಮಾನಸಿಕವಾಗಿ ದುರ್ಬಲನಾಗಿದ್ದ. ಆಲ್ಫಾನ್ಸೋನ ಆಳ್ವಿಕೆಯ ಅವಧಿಯ ಉಳಿದ ಕಾಲದಲ್ಲಿ (1667-1683) ಇವನು ರಾಜಪ್ರತಿನಿಧಿಯಾಗಿ ಆಯ್ಕೆಯಾದ. 1683ರಲ್ಲಿ ಇವನು ರಾಜನಾಗಿ 1703ರಲ್ಲಿ ತೀರಿಕೊಳ್ಳುವವರೆಗೂ ಆಳಿದ. ಸ್ಪೇನಿನೊಂದಿಗೆ ಶಾಂತಿಯ ಕೌಲು (1668). ಪೋರ್ಚುಗಲ್ಲಿನ ಹಣಕಾಸು ಸ್ಥಿತಿಯ ಸುಧಾರಣೆ, ಇಂಗ್ಲೆಂಡಿನೊಂದಿಗೆ ವಾಣಿಜ್ಯ ಕೌಲಿನ ಸಂಧಾನ (1703). ಸ್ಪೇನಿನ ಉತ್ತರಾಧಿಕಾರದ ಯುದ್ಧದಲ್ಲಿ ತಾಟಸ್ಥ್ತ್ಯದಿಂದಿರಲು ಪ್ರಯತ್ನ (1703) ಇವು 2ನೆಯ ಪೇದ್ರೂನ ಆಳ್ವಿಕೆಯ ಕೆಲವು ಸಾಧನೆಗಳು. ಕೊನೆಕೊನೆಗೆ ಇವನು ಫ್ರಾನ್ಸಿನ ವಿರುದ್ಧವಾದ ಕೂಟದ (ಗ್ರ್ಯಾಂಡ್ ಆಲೈಯೆನ್ಸ್) ಪರವಾಗಿದ್ದ.
ಪೇದ್ರೂ III: 1717-1786. ಇವನು ಬ್ರಗಾಂನ್ಜಾ ಮನೆತನದವನೇ. ಈತ 5ನೆಯ ಜಾನನ ಎರಡನೆಯ ಮಗ. 2ನೆಯ ಪೇದ್ರೂನ ಮೊಮ್ಮಗ. ದೊರೆ ಜೋಸೆಫ್ ಎಮ್ಯಾನ್ಯುಯೆಲನ ಸೋದರ. 1760ರಲ್ಲಿ ಇವನು ತನ್ನ ಅಣ್ಣನ ಮಗಳಾದ ಮರೀಯಳನ್ನೆ ಮದುವೆಯಾದ. 1777ರಲ್ಲಿ ತನ್ನ ಹೆಂಡತಿಯೊಂದಿಗೆ (1ನೆಯ ಮರೀಯ) ಸಂಯುಕ್ತವಾಗಿ ದೊರೆಯಾದ ಇವನು ತೀರಿಕೊಂಡದ್ದು 1786ರಲ್ಲಿ. 

ಪೇದ್ರೂ Iಗಿ: 1798-1834. ಆರನೆಯ ಜಾನನ ಮಗ. ಲಿಸ್ಟನ್ನಿನಲ್ಲಿ ಹುಟ್ಟಿದ. ಪೋರ್ಚುಗಲ್ಲಿನ ದೊರೆ 1807ರಲ್ಲಿ ಫ್ರೆಂಚರು ಪೋರ್ಚುಗಲ್ಲನ್ನು ಗೆದ್ದರು. ರಾಜಕುಟುಂಬದ ಜೊತೆಯಲ್ಲಿ ಇವನು ಬ್ರಜಿóಲ್‍ಗೆ ಓಡಿಹೋದ. ದೊರೆ ಜಾನ್ ಇವನನ್ನು ಬ್ರಜಿóಲ್ಲಿನ ರಾಜರಕ್ಷಕನಾಗಿ ಮಾಡಿ (1821) ಪೋರ್ಚುಗಲ್ಲಿಗೆ ಹಿಂದಿರುಗಿದ. ಇವನು ಬ್ರಜಿóಲಿನಲ್ಲೇ ಉಳಿದು, ಪೋರ್ಚುಗೀಸರ ಪ್ರತಿಗಾಮಿ ನೀತಿಯ ವಿರುದ್ಧವಾಗಿ ಬ್ರಜಿóಲಿಯನ್ನರ ಪಕ್ಷ ವಹಿಸಿದ. 1822ರಲ್ಲಿ ಬ್ರಜಿóಲ್ಲಿನ ಸ್ವಾತಂತ್ರ್ಯವನ್ನು ಘೋಷಿಸಿದ. ಅದೇ ವರ್ಷ ಇವನಿಗೆ ಬ್ರಜಿóಲ್ಲಿನ ಚಕ್ರವರ್ತಿಯ ಪಟ್ಟ ಕಟ್ಟಲಾಯಿತು. ಇವನು ನಿರಂಕುಶ ಆಡಳಿತದಲ್ಲಿ ತೊಡಗಿದ್ದರಿಂದ ಈತನ ಜನಪ್ರಿಯತೆ ಕ್ರಮೇಣ ಕ್ಷೀಣಿಸಿತು. 1824ರಲ್ಲಿ ಇವನು ಬ್ರಜಿóಲ್ಲಿನ ಹೊಸ ಸಂವಿಧಾನವನ್ನು ಘೋಷಿಸಿದ. 1831ರಲ್ಲಿ ಇವನು ಬ್ರಜಿóಲ್ ಸಿಂಹಾಸನವನ್ನು ತ್ಯಜಿಸಿ ಯೂರೋಪಿಗೆ ಹಿಂದಿರುಗಿದ. 1826ರಲ್ಲಿ ಇವನು ಪೋರ್ಚುಗಲ್ಲಿನ ದೊರೆಯೆಂದು ಘೋಷಿಸಲಾಯಿತು. ಮಗಳಾದ ಮರೀಯದ ಗ್ಲೋರಿಯಳಿಗಾಗಿ (2ನೆಯ ಮರೀಯ) ದೊರೆತನವನ್ನು ತ್ಯಜಿಸಿದ. ಸಿಂಹಾಸನವನ್ನು ಅಪಹರಿಸಿದ್ದ ಸೋದರ ಮಿಗೆಲನ ಮೇಲೆ ಯುದ್ಧಮಾಡಿ ಗೆದ್ದ. 1834ರಲ್ಲಿ ಈತ ತೀರಿಕೊಂಡ. 

ಪೇದ್ರೂ ಗಿ: 1837-1861. 2ನೆಯ ಮರೀಯಳ ಮತ್ತು 2ನೆಯ ಫರ್ಡಿನಾಂಡನ ಮಗ, 1853-1861ರಲ್ಲಿ ಪೋರ್ಚುಗಲ್ಲಿನ ದೊರೆಯಾಗಿದ್ದ. 1853-55ರಲ್ಲಿ ತಂದೆ ಫರ್ಡಿನಾಂಡ್ ರಾಜ ಪ್ರತಿನಿಧಿಯಾಗಿದ್ದ. 1857ರಲ್ಲಿ ಹೋಹೆನ್‍ಜಾಲರ್ನ್‍ನ ರಾಜಕುಮಾರಿ ಸ್ಟಿಫಾನಿಯೊಂದಿಗೆ ಇವನ ವಿವಾಹವಾಯಿತು. ಕಾಲರ ರೋಗದಿಂದ ಇವನು ತೀರಿಕೊಂಡ.
(ಆರ್.ಜಿ.ಎಸ್.)

ಬ್ರಜಿಲ್ಲಿನ ಚಕ್ರವರ್ತಿಗಳು : ಪೇದ್ರೂ I: ಪೋರ್ಚುಗಲ್ಲಿನ 4ನೆಯ ಪೇದ್ರೂ ದೊರೆಯೇ ಬ್ರಜಿಲ್ಲಿನ 1ನೆಯ ಪೇದ್ರೂ ಚಕ್ರವರ್ತಿ. ಪೋರ್ಚುಗಲ್ಲಿನ ಪೇದ್ರೂ ದೊರೆಗಳನ್ನು ನೋಡಿ.

ಪೇದ್ರೂ II: 1825-1891. 1ನೆಯ ಪೇದ್ರೂನ ಮಗ ರೈಯೊ ಡಿ ಜನೈರೋದಲ್ಲಿ ಹುಟ್ಟಿದ. ತಂದೆ ಚಕ್ರವರ್ತಿ ಪದವಿಯನ್ನು ತ್ಯಾಗ ಮಾಡಿದಾಗ (1831) ಇವನು ಸಿಂಹಾಸನವೇರಿದ. 1841ರಲ್ಲಿ ಈತನ ಕಿರೀಟಧಾರಣೆಯಾಯಿತು. ಇವನ ಆಳ್ವಿಕೆಯ ಆರಂಭದ ವರ್ಷಗಳಲ್ಲಿ ದೇಶದಲ್ಲಿ ಅನೇಕ ಕ್ರಾಂತಿಕಾರಿ ಬಂಡಾಯಗಳು ಸಂಭವಿಸಿದುವು. ಅರ್ಜೆಂಟೀನದ ರೋಸಾಸನ ವಿರುದ್ಧವಾಗಿ ಉಕ್ರ್ವಿಜಾóನಿಗೆ ನೆರವು ನೀಡಿದ. ಪರಗ್ವೇ ವಿರುದ್ಧ ಯುದ್ಧದಲ್ಲಿ (1865-70) ಅರ್ಜೆಂಟೀನ ಮತ್ತು ಉರುಗ್ವೆಗಳೊಂದಿಗೆ ಸೇರಿದ್ದ ಇವನು ಯೂರೋಪಿಗೆ ಆಗಿಂದಾಗ್ಗೆ ಪ್ರವಾಸ ಕೈಗೊಳ್ಳುತ್ತಿದ್ದ. ಆ ಸಮಯದಲ್ಲಿ ಈತನ ಮಗಳು ಇಸಬೆಲ್ಲ ರಾಜ ಪ್ರತಿನಿಧಿಯಾಗಿದ್ದಳು. 1889ರಲ್ಲಿ ಬ್ರಜಿಲ್ ಗಣರಾಜ್ಯವಾದಾಗ ಇವನು ಸಿಂಹಾಸವನ್ನು ತ್ಯಜಿಸಬೇಕಾಯಿತು. ಇವನನ್ನು ಯೂರೋಪಿಗೆ ಕಳುಹಿಸಲಾಯಿತು. ಪ್ಯಾರಿಸಿನಲ್ಲಿ ಇವನು ತೀರಿಕೊಂಡ. ಇವನು ಸುಸಂಸ್ಕøತನಾಗಿದ್ದನೆಂದೂ ಇವನ ಆಳ್ವಿಕೆಯ ಕಾಲದಲ್ಲಿ ಬ್ರಜಿóಲ್ ಬಹಳ ಪ್ರಗತಿ ಸಾಧಿಸಿತೆಂದೂ ಹೇಳಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ